ಸೂರ್ಯಾಸ್ತ
ನಾನು ಕಂಡ ಸೂರ್ಯಸ್ತಮಾನ
ಮೂಡಣದಿ ಮೂಡಿದ ದಿನಕರ ಭಾನಚೆ ಜಾರುವ ಗಳಿಗೆ
ಚೆಲ್ಲಿತು ಆಗಸದಲ್ಲಿ ಕಂಡಿತು ಕೆಂಬಣ್ಣದ ಮಳಿಗೆ
ಮನಮುಟ್ಟುವ ತಂಗಾಳಿಯ ಸುಗಂಧದ ನಡಿಗೆ
ಬೇಕಲ ಕೋಟೆ ಆಸ್ತಿ ಈ ಭವ್ಯ ನಾಡಿಗೆ
ಚೆಲ್ಲಿದ ಕಿರಣವು ಮಾಯವಾಗುವ ಹಾಗೆ
ಸಮುದ್ರರಾಜನ ಪ್ರೀತಿಯ ನಮ್ರತೆಯ ವಿದಾಯವು ಹೀಗೆ
ಯಾಕೆಂದರೆ ಅದಾಗಲ್ಲೇ ಬೀರಿತ್ತು ಮುಸ್ಸಂಜೆ ನಗೆ
ಆ ನಗುವ ಕಂಡು ಹೂವು ಅರಳಲು ಮನದೊಳಗೆ
ಸಾಗರದ ಮಾರುತದ ಮಧುರ ಸ್ಪರ್ಶದ ಸಿಂಚನ
ಜೊತೆಯಲ್ಲಿ ಸೂರ್ಯಸ್ತದ ಸುಮಧುರ ಕ್ಷಣ
ಕಣ್ತುಂಬಿಕೊಳ್ಳುವ ಈ ಗಳಿಗೆ ಬಾಳಿಗೆ ಹೋಳಿಗೆ
ಇನ್ನು ಕೇವಲ ಇರುವುದು ನೆನಪುಗಳೇ ಬಳಿಗೆ
ಸಾಗರದ ತೆರೆಗಳ ಮಧ್ಯೆ ತೆರೆಎಳೆಯಲು ಹೊರಟ ರವಿ
ಆ ದಿವ್ಯಾನುಭೂತಿ ಸವಿದ ರಸಕವಿ
ಕವಿಯ ಮನದೊಳಗಡೆ ಹುಟ್ಟಲು ಹೊಸ ಕವಿತೆ
ಕವಿ ಎನ್ನಲು ಮಂಜು ಕರಗಿದಂತೆ ನಾ ಸೋತೆ ಸೋತೆ
ಗಿರೀಶ್ ಪಿಎಂ
ಕಾಸರಗೋಡು
Comments
Post a Comment