ಸಾವು ಸುತ್ತ ನೋವು
*ಸಾವು ಎಷ್ಟು ದೂರವೋ ಅಷ್ಟೇ ಸಮೀಪ!* ರಾತ್ರಿ ಕಳೆದು ಬೆಳಕು ಹರಿಯುವುದರೊಳಗೆ ಈ ಜಗತ್ತಿನಲ್ಲಿ ಅದೆಷ್ಟೋ ಬದಲಾವಣೆಗಳು ವಿಂಚಂತೆ ನಡೆದು ಹೋಗುತ್ತವೆ. ಸಮಯ ಕಳೆಯುವುದರೊಳಗೆ ಎಲ್ಲವೂ ಮುಗಿದು ಜೊತೆಗಿದ್ದವರು ಕೇವಲ ನೆನಪಾಗಿ ಉಳಿದುಬಿಡುತ್ತಾರೆ. ನಮ್ಮನ್ನು ಬಿಟ್ಟೂ ಬಿಡದೆ ಕಾಡುವ ಪ್ರಶ್ನೆಯೇ ಈ ಸಾವು. ನಾನು ಇದ್ದಾಗ ಸಾವು ಬರಲ್ಲ, ಸಾವು ಬಂದಾಗ ನಾನು ಇರಲ್ಲ ಎನ್ನುವ ಕವಿವಾಣಿ ನೆನಪಾಗುತ್ತದೆ. ಕಳೆವ ಪ್ರತಿಯೊಂದು ಗಳಿಗೆಯನ್ನೂ ಸಂತಸದಿಂದ ಕಳೆಯಬೇಕು. ಏಕೆಂದರೆ ಸಾವು ನಾಳೆಯೇ ಬರಬಹುದು! ಈ ನಿಮಿಷವೇ ಬರಬಹುದು! ಯಾರನ್ನೂ ಕೇಳದೆ ಯಾರಲ್ಲೂ ಹೇಳದೆ ಎಂದಾದರೂ ಒಂದು ದಿನ ಬಂದೇ ಬರುತ್ತದೆ…ಬೇಡ ಎಂದರೂ ಅಪ್ಪಿಕೊಳ್ಳುತ್ತದೆ. ಈ ಕಹಿಸತ್ಯ ತಿಳಿದಿದ್ದರೂ ಆ ದಿನ ನಡೆದ ಘಟನೆ ನನ್ನ ಕಣ್ಣನ್ನು ಒದ್ದೆಯಾಗಿಸಿತು. ಮನಸ್ಸು ಭಾವುಕವಾಯಿತು. ನಾನು ದಿನಾ ಕಾಣುವ ರೈಲ್ವೆ ನಿಲ್ದಾಣದಲ್ಲಿ ಅದೆಷ್ಟೋ ಶ್ವಾನಗಳಿದ್ದರೂ ಕಳೆದ ಏಳೆಂಟು ತಿಂಗಳುಗಳ ಹಿಂದೆ ಒಂದು ಶ್ವಾನ ನನ್ನ ಗಮನ ಸೆಳೆಯಿತು. ನೋಡಲು ಗುಂಡುಗುಂಡಾಗಿದ್ದರಿಂದ ನಾವೇ ಪ್ರೀತಿಯಿಂದ ಗುಂಡ ಎಂದು ನಾಮಕರಣವನ್ನೂ ಮಾಡಿದೆವು. ನಿಲ್ದಾಣದಲ್ಲೇ ಸಾಕಷ್ಟು ಸಮಯ ಕಳೆಯಬೇಕಾಗಿದ್ದ ನಮಗೆ, ಈ ಗುಂಡನ ಆಟ ನೋಡುವುದೇ ಖುಷಿ. ನನ್ನಂತೆ ಇತರರಿಗೂ ಗುಂಡನೆಂದರೆ ಅಚ್ಚುಮೆಚ್ಚು. ಆತ ಪ್ರತಿದಿನ ರೈಲು ನಿಲ್ದಾಣದಲ್ಲಿ ನನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದ. ಗುಂಡನಿಗೆ ಬೇಕರಿ ತಿನಿಸು ತಿನ್ನಿಸ...